Wednesday, September 22, 2010

ದಿನಾಂಕ : ೨೨-೦೯-೨೦೧೦, ಬುಧವಾ
ಚರ್ಚಿಸಲು ಇರುವ ವಿಷಯಗಳು
1) ರಸ್ತೆಯಲ್ಲಿ ಯಾವುದೇ ವಾಹನದಲ್ಲಿ ಚಲಿಸುವಾಗ ಸಿಗರೇಟು ಸೇದುವುದು ಸರಿಯೇ ತಪ್ಪೆ?...
    ಅಕಸ್ಮಾತ್ ಯಾರಾದರು ಜನರಿರುವ ಜಾಗದಲ್ಲಿ ಸಿಗರೇಟು ಸೇದಿದಲ್ಲಿ ನೀವು ನಮಗೆ ಕರೆ ಮಾಡಿ
 - ಸುದ್ಧಿಲೋಕ 24 X 7

ನಮ್ಮ ಪಾಪು ಮತ್ತು ಗಾಂಧಿ

Add ca
ನಮ್ಮ ಪಾಪು ಮತ್ತು ಗಾಂಧಿ
 

Friday, July 4, 2008

ನಮ್ಮ ಬೆಂಗಳೂರು - "ನಮ್ಮ ತಂಡ ಸದಾ ನಿಮ್ಮ ಸಂಗಡ...... "

"ನಮ್ಮ ಬೆಂಗಳೂರು " ಈ ಹೆಸರಿನಲ್ಲಿ ನಮ್ಮ ಭಾರತದ ಸಮಸ್ತ ಸಹೋದರ, ಸಹೋದರಿಯರಿಗಾಗಿ ಒಂದು ಬ್ಲಾಗ್ ತೆರೆದಿದ್ದೇವೆ. ದಿನನಿತ್ಯ ನೀವುಗಳು ಎದುರಿಸುವ ಅನೇಕ ಭ್ರಷ್ಟಾಚಾರ, ಲಂಚ, ದಬ್ಬಾಳಿಕೆ, ನಿಮ್ಮ ಊರಿನಲ್ಲಿ ನಡೆಯುವ ಪವಾಡಗಳು ಹಾಗು ಇತರೆ ತೊಂದರೆಗಳನ್ನು ವರುಷದ ಯಾವುದೇ ದಿನ, ಯಾವುದೇ ಸಮಯದಲ್ಲೂ ಈ ಕೆಳಕಂಡ ಇ-ಮೇಲ್ ಗೆ ತಿಳಿಸಿ.
nammabengaluru08@gmail.com

ಅಥವಾ
0-98454 89452 ಗೆ ಕರೆ ಮಾಡಬಹುದು

ನಮ್ಮ ತಂಡ ಸದಾ ನಿಮ್ಮ ಸಂಗಡ......

"NAMMA BENGALURU" by this title our team is purely dedicated to all my Brothers and Sisters of INDIA those facing lots of Corruption, Problems in their day to day life.You can give any information regarding Corruption, Problems to this blog round the clock 24X365. OR You can mail us to:
nammabengaluru08@gmail.com

So, Finally our team is ready to provide you a little Care....round the clock 24X365.....

OR Call us : 0-98454 89452

Sunday, April 20, 2008

ಪ್ರೀತಿಸಿರೋ


ಬಿಸಿರಕ್ತವೆಂಬುದನು ಮರೆತು

ಅಹಂಕಾರವೆಂಬ ಕೆಂಪಾಂಬುದಿಯಲಿ

ಮುಳುಗಬೇಡಿರೋ ಯುವಕರೇ...

ಅಂತರಾಳದ ಸದ್ಗುಣವನೇ ತೆರೆಯಿರೋ...ಮೆರೆಯಿರೋ...

ಬಿಸಿರಕ್ತವೆಂಬ ತವಕದಲಿ

ಅನುರಕ್ತತೆಯನು ತೋರದಿರಿ

ನಮ್ಮಯ ಸದ್ಗುಣ ಯುವಕರೇ

ಬಿಸಿರಕ್ತದಲಿ ಹಿಂದೆಸಗಿದ

ಪಾಪವನು ಮತ್ತೆಸಗದಿರಿ

ಮತ್ತೆಸಗಿ ಮರಳಿ ನರಕಕ್ಕೇ ಬೀಳದಿರಿ...

ನಮ್ಮಯ ಸಾಹಸಿ ಯುವಕರೇ...

ಬಿಸಿರಕ್ತವೆಂಬುದನು ಮರೆತು

ಪೊಸಚೆಲ್ವಿನ ಪ್ರೀತಿಸುವ ಪರಿಯಲ್ಲಿ

ನಮ್ಮಯ ನಾಡು-ನುಡಿಗಳನು ಪ್ರೀತಿಸಿರೋ...

ಪ್ರೀತಿಸಿ ಪಡೆಯಿರೋ...ಅನಂತ ಧನ್ಯತೆಯಾ...

-ಶ್ರೀನಾಥ್.ಎಸ್

ತನುಮನ

ಪ್ರಗತಿ ಪಥದ
ಹೂಸವರುಷ
ತರಲಿ ಹುರುಪು, ಹರುಷ
ಇರಲಿ (ತರಲಿ) ಜೀವನಕೆ
ನವಚೇತನ
ಆಗಿರಲಿ ಪ್ರೀತಿಯ ವೃಂದಾವನ
ನಮ್ಮೆಲ್ಲರ ತನುಮನ

-ಶ್ರೀನಾಥ್.ಎಸ್

ಮುನ್ನುಗ್ಗಿ

ಬಂಧುಗಳೇ ನೆನಪಿರಲೆಂದೆಂದೂ
ನನ್ನದೀ... ನುಡಿಯೂಂದು
ಕಾಲಚಕ್ರ ನಿಲ್ಲದೆಂದೂ...
ಮುನ್ನುಗ್ಗಿರೆಲ್ಲರೂ ಅದರೊಂದಿಗೆಂದೆಂದೂ

-ಶ್ರೀನಾಥ್.ಎಸ್

ಬರ

ಭಾವಕ್ಕೆ ಅಭಾವವಿರದಿರಲಿ
ಸ್ನೇಹಕ್ಕೆ ಸಂಕೋಲೆಯಿಲ್ಲದಿರಲಿ
ಬದುಕಿಗೆ "ಬರ" ಬಾರದಿರಲಿ

-ಶ್ರೀನಾಥ್.ಎಸ್

ಬದಲಾವಣೆ

ಆಗಬೇಕು ಬದಲಾವಣೆ
ಕನ್ನಡ ನಾಡಲ್ಲಿ
ನಡೆಯಬೇಕು ಚಲಾವಣೆ
ಕನ್ನಡ ಭಾಷೇಲಿ...


ನಿಮ್ಮವ...
- ಶ್ರೀನಾಥ್.ಎಸ್

ಕವಿಯು ನಾನಲ್ಲ

ಕವಿಯು ನಾನಲ್ಲ
ಆದರೂ ಬರೆವೆನಲ್ಲ!!!
ಓ ದೇವರೆ...
ನಡೆಸು ನನ್ನನು
ಕತ್ತಲಿಂದ ಬೆಳಕಿನೆಡೆಗೆ
ಜೇಡಬಲೆಗೆ ಸಿಕ್ಕಿ ಎಷ್ಟು
ಜಗ್ಗಿದರೂ ಮುಗ್ಗರಿಸಿಹೆ
ಎದ್ದು ಮತ್ತೆ
ಒಂದರಿಂದೆಣಿಕೆ...
ಬರೆದಿದ್ದು ಒಂದಿಷ್ಟು
ಕಲಿತದ್ದು ಬಹಳಷ್ಟು
ಕಲಿಯಬೇಕಾದ್ದು ಅನಂತ....
ಕವಿಯು ನಾನಲ್ಲ
ಆದರೂ ಬರೆವೆನಲ್ಲಾ!!!
ಅರಿತಿಹೆನು
ಬರೆದದ್ದೆಲ್ಲಾ ಕವನವಲ್ಲಾ...
ಬರವಣಿಗೆಯೇ ಬದುಕಿನ ಕೊನೆಯಲ್ಲ...
- ಶ್ರೀನಾಥ್.ಎಸ್

Thursday, April 17, 2008

ನಮ್‌ ನುಡಿ

ನಮ್‌ ನುಡಿ ನಮ್‌ ನುಡಿ
ಕನ್ನಡ್‌ ನುಡಿ
ಕನ್ನಡ್‌ ನುಡಿ ಆಡೋದು ನಮ್‌ ಜೀವನ್ಗುರಿ
ಕನ್ನಡ್‌ ಬಂದ್ರೂ ಆಡ್ದಿದ್ದಾಂವಾ, ಬರೀ ಬಿಕನಾಸಿ ಕಣ್ರೀ...

ಕನ್ನಡಿಗನಾ ನೀನ್‌?
ಸಂದೇಹವೆನಗೆ
ಕನ್ನ-ಅಡಿಗನೇನೋ!!!

ಬ್ಯಾಡ್ರಿ ಬ್ಯಾಡ್ರಿ, ಈ ಪಾಟಿ ಕಸರತ್ತು ಬ್ಯಾಡ್ರೀ...
ಇರ್‌ಬೇಕು ಸ್ವಲ್ಪನಾದ್ರೂವೇ ಸರತ್ತು
ಬಿಡ್‌ದಾಂಗ್‌ ಪಾಲಿಸಿ, ಕನ್ನಡ್‌ ನುಡಿಯೋದನ್ನ
ಯಾಕಂದ್ರ
ಕನ್ನಡ್‌ದಾಗಾಡೋನ್‌ ಮನ್ಸು ಕಸ್ತೂರಿ ಕಣ್ರೀ...

ಆಡ್‌ಬೇಕ್ರೀ ಕನ್ನಡ್‌ದಾಗ
ಹಾಡಿಸ್‌ಬೇಕ್ರೀ ಕನ್ನಡ್‌ದಾಗ
ಕನ್ನಡ್‌ ಪದಗೋಳ್‌ ಬೇಕು ಅಂದ್ರೆ ಕುಣಿದಾಡುತ್ತೆ
ಕನ್ನಡಾಂಬೆಯ ಮನ
ಕನ್ನಡ್‌ ಪದಗೋಳ್‌ ಬೇಡಾ ಅಂದ್ರೆ...ಸುಡುಗಾಡೇ
ಗತಿ ನಿಂಗೆ...

- ಶ್ರೀನಾಥ ಎಸ್‌.

Friday, April 11, 2008

ನಿಮಮೊಂದಿಗೆ ನಿಮ್ಮವ...

ನಿಮ್ಮ ಸಮಸ್ಯೆಗಳು ಏನಾದರೂ ಇದ್ದರೆ, ನನ್ನೊಂದಿಗೆ ಹಂಚಿಕೊಳ್ಳಿ. ಒಟ್ಟಿಗೇ ಪರಿಹಾರ ಕಂಡುಕೊಳ್ಳಬಹುದು.

ಜೀವನದಲ್ಲಿ ಬೇಕಾದಷ್ಟು ಸವಾಲುಗಳು ಎದುರಾಗುತ್ತವೆ. ಸಮಸ್ಯೆಗಳು ಬರುತ್ತವೆ. ಆ ಕ್ಷಣದಲ್ಲಿ ಏನು ಮಾಡಬೇಕೆಂಬುದೇ ತೋಚುವುದಿಲ್ಲ. ಬಹುಶಃ ನಾವೆಲ್ಲರೂ ಇಂಥ ಸಮಸ್ಯೆಗಳಲ್ಲಿ ಆಗಾಗ ಸಿಕ್ಕಿ ಹಾಕಿಕೊಳ್ಳುತ್ತಲೇ ಇರುತ್ತೇವೆ. ಏನು ಮಾಡಬೇಕು ಆಗ?

ನಿಮಗೂ ಹೀಗೇ ಅನಿಸುತ್ತದೆಯೆ? ಅಂಥ ಸಮಸ್ಯೆಗಳ ಬಗ್ಗೆ ನಾವೇಕೆ ಪರಸ್ಪರ ಚರ್ಚಿಸಬಾರದು? ಚರ್ಚೆಗಳಿಂದ ಏನಾದರೂ ಪರಿಹಾರ ಸಿಗಬಹುದು. ಅದನ್ನು ಎಲ್ಲರಿಗೂ ಹಂಚೋಣ. ನಮ್ಮ ಸಮಸ್ಯೆಗಳಿಗೆ ನಮ್ಮಲ್ಲೇ ಪರಿಹಾರ ದೊರೆತರೆ ಎಷ್ಟು ಚೆನ್ನ, ಅಲ್ಲವೆ?

ಆ ಉದ್ದೇಶದಿಂದ, ’ಶ್ರೀಲೋಕ’ ಹೆಸರಿನ ಬ್ಲಾಗ್‌ ಪ್ರಾರಂಭಿಸುತ್ತಿದ್ದೇನೆ. ದಯವಿಟ್ಟು ಓದಿ, ಸಲಹೆ ಕೊಡಿ.

ಇಂತಿ ನಿಮ್ಮವ...

- ಶ್ರೀನಾಥ ಎಸ್

ಹಾಯ್‌ !

ಇದು ನನ್ನ ಹೊಸ ಬ್ಲಾಗ್‌.

ವಿಳಾಸ: http://shriloka.blogspot.com

ದಯವಿಟ್ಟು ಬ್ಲಾಗ್‌ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

- ಶ್ರೀನಾಥ್‌ ಎಸ್‌.